ಕಾಂಡ್ರಾಯಿಟಿನ್ ಸಲ್ಫೇಟ್

 ಕಶೇರುಕ ಪ್ರಾಣಿಗಳ ಮೃದ್ವಸ್ಥಿಯ (ಕಾರ್ಟಿಲೇಜ್) ತೆರಪಿನಲ್ಲಿರುವ ಜೆಲ್ಲಿಯಂಥ ಪದಾರ್ಥದ ಹೆಸರು ಕಾಂಡ್ರೊಮ್ಯೂಕಾಯಿಡ್; ಇದು ಗಂಧಕವುಳ್ಳ ಸಕ್ಕರೆಯ ಸ್ವರೂಪದ ಜಟಿಲವಸ್ತುಗಳಿಂದಾಗಿರುವುದರಿಂದ ಇದಕ್ಕೆ ಕಾಂಡ್ರಾಯಿಟಿನ್ ಸಲ್ಫೇಟ್ ಎಂಬ ಹೆಸರು ಬಂದಿದೆ. ಮೃದ್ವಸ್ಥಿ ಸ್ಟೇನ್ ಆಗುವ ಗುಣಕ್ಕೆ ಇದು ಕಾರಣವಾಗಿದೆ.

(ಪಿ.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ